ತ್ಯಾಗ, ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬಕ್ಕೆ ಇನ್ನೊಂದು ದಿನ ಬಾಕಿ ಉಳಿದಿದ್ದು, ಕುರಿ, ಮೇಕೆ, ನಾಟಿ ಕೋಳಿಗಳಿಗೆ ಬೇಡಿಕೆ ಹೆಚ್ಚಿದೆ. ಬಕ್ರೀದ್ ಹಿನ್ನೆಲೆ ಸಂತೆಗಳಲ್ಲಿ ಕುರಿ, ಮೇಕೆ, ನಾಟಿ ಕೋಳಿಗಳು ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ. ಜೊತೆಗೆ ಈಗಾಗಲೇ ಮುಸ್ಲಿಂ ಬಾಂಧವರು ರೈತರಿಂದಲೂ ಕುರಿ, ಮೇಕೆಗಳನ್ನು ಖರೀದಿಸುತ್ತಿದ್ದಾರೆ. ಕಳೆದ ಆರು ವರ್ಷಗಳಿಂದ ನಾನು ಕುರಿ ಸಾಕಾಣಿಕೆ ಮಾಡುತ್ತಿದ್ದು, ಪ್ರತಿ ವರ್ಷ ಬಕ್ರೀದ್‌ಗೆ ಕುರಿಗಳನ್ನು ಮಾರಾಟ ಮಾಡುತ್ತಿದ್ದೇವೆ. ಈ ವರ್ಷ 25 ಕುರಿಗಳನ್ನು ಬೆಂಗಳೂರಿನ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದೇನೆ. 25 ರಿಂದ 30 ಕೆ.ಜಿ ಬರುವ ಕುರಿಯನ್ನು ₹25 ರಿಂದ ₹30 ಸಾವಿರಕ್ಕೆ ಮಾರಾಟ ಮಾಡಿದ್ದಾರೆ.