ಮಳವಳ್ಳಿ : ತಾನು ಎಸ್ಸಿ ಎಸ್ಟಿಗಳ ಪರ ಎಂದು ಬೊಗಳೆ ಬಿಡುತ್ತ ಆ ವರ್ಗದ ಜನರ ಹೆಚ್ಚಿನ ಮತಗ ಳಿಂದಲೇ ಅಧಿಕಾರಕ್ಕೆ ಬಂದ ರಾಜ್ಯದಲ್ಲಿನ ಕಾಂಗ್ರೆಸ್ ಪಕ್ಷ ಎಸ್ಟಿ ವರ್ಗಕ್ಕೆ ಸೇರಿದ ಸಚಿವ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾ ಗೊಳಿಸಿರುವುದು ಈ ವರ್ಗಕ್ಕೆ ಬಗೆದ ದ್ರೋಹವಾಗಿದೆ ಎಂದು ಬಿಎಸ್ಪಿ ಪಕ್ಷದ ರಾಜ್ಯಾಧ್ಯಕ್ಷ ಎಂ ಕೃಷ್ಣಮೂರ್ತಿ ಅವರು ಕಾಂಗ್ರೆಸ್ ನಡೆಯನ್ನು ಖಂಡಿಸಿದ್ದಾರೆ. ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸಾಯಂಕಾಲ 4.30ರ ಸಮಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಈಗಾಗಲೇ ನಾಗೇಂದ್ರ ಅವರನ್ನು ಸಂಪುಟ ದಿಂದ ಕೈಬಿಡಲಾಗಿದ್ದು ಈಗ ರಾಜಣ್ಣ ಅವರನ್ನು ವಜಾಗೊಳಿ ಸುವ ಮೂಲಕ ತಾನು ಎಸ್ಸಿ ಎಸ್ಟಿಗಳ ವಿರೋಧಿ ಎಂಬುದನ್ನು ಸಾಬೀತು ಪಡಿಸಿದೆ ಎಂದು ಟೀಕಿಸಿದರು.