ಚಿತ್ರದುರ್ಗ ನಗರಸಭೆಗೆ ನೂತನ ಅಧ್ಯಕ್ಷರಾಗಿ 20ನೇ ವಾರ್ಡ್ ನ ಎಂ.ಪಿ.ಅನಿತಾ ರಮೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪ ವಿಭಾಗಾಧಿಕಾರಿಗಳಾದ ಮಹಮ್ಮದ್ ಜಿಲಾನಿ ಖುರೇಷಿ ಅವರು ಚುನಾವಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದು, ಚುನಾವಣಾ ನಾಮಪತ್ರ ಸಲ್ಲಿಸುವ ಸಮಯದಲ್ಲಿ ಎಂ.ಪಿ. ಅನಿತಾರವರು ಎರಡು ನಾಮಪತ್ರಗಳನ್ನು ಸಲ್ಲಿಸಿದ್ದು ಎರಡು ನಾಮಪತ್ರಗಳು ಸಿಂಧೂವಾಗಿದ್ದು, ನಾಮಪತ್ರ ವಾಪಾಸ್ಸು ಪಡೆಯುವ ಸಮಯ ಪೂರ್ಣವಾದ ನಂತರ ಎಂ.ಪಿ.ಅನಿತಾರವರನ್ನು ಚಿತ್ರದುರ್ಗ ನಗರಸಭೆಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆಯನ್ನು ಮಾಡಿದರು