ಚಾಮರಾಜನಗರ: ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಪ್ರವಾಸಿಗರಿಗೆ ಸದಾ ಕಣ್ತುಂಬುತ್ತಿದ್ದ ಮೂರ್ಕೆರೆ ತಾಯಿ ಹುಲಿ ಕಳೆದ 20 ದಿನಗಳಿಂದ ನಾಪತ್ತೆಯಾಗಿದ್ದು, ಈ ವಿಷಯ ಅರಣ್ಯಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಸಾಮಾನ್ಯವಾಗಿ ತನ್ನ ನಾಲ್ಕು ಮರಿಗಳೊಂದಿಗೆ ಕಾಣಿಸಿಕೊಳ್ಳುತ್ತಿದ್ದ ಈ ತಾಯಿ ಹುಲಿ, ಬಂಡೀಪುರದ ಕೇಂದ್ರ ಆಕರ್ಷಣೆಯಾಗಿ ಕೇಂದ್ರವಾಗಿತ್ತು. ಇಪ್ಪತ್ತು ದಿನಗಳ ಹಿಂದೆ, ಪ್ರವಾಸಿಗರೊಬ್ಬರ ಮೊಬೈಲ್ ಕ್ಯಾಮೆರಾದಲ್ಲಿ ಅದು ಕಾಲಿಗೆ ಗಾಯಗೊಂಡು ಕುಂಟುತ್ತಾ ನಡೆಯುತ್ತಿರುವ ದೃಶ್ಯ ಸೆರೆಯು ಸಹ ಆಗಿತ್ತು. ಇದಾದ ಬಳಿಕ ಈ ತಾಯಿ ಹುಲಿಯನ್ನು ಯಾರೂ ಮತ್ತೆ ಕಾಣಲಿಲ್ಲ. ಈಗಾಗಲೇ ಅರಣ್ಯ ಇಲಾಖೆ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಿ ಹುಲಿಯ ಪತ್ತೆಗೆ ಬೃಹತ್ ಕಾರ್ಯಾಚರಣೆಗೆ ಮುಂದಾಗಿದೆ