ತಾಲೂಕಿನ ಪೋತ್ನಾಳ ಟು ಉದ್ಭಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಜೀನೂರು ಸೇತುವೆ ಬಳಿ ರಸ್ತೆಯ ಮಣ್ಣು ಕುಸಿದು ಕ್ರೇನ್ ಪಲ್ಟಿ ಹೊಡೆದ ಘಟನೆ ಆಗಸ್ಟ್ 26 ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಘಟನೆ ಸಂಭವಿಸಿದ್ದು, ಕ್ರೇನ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಕಳೆದ ಒಂದು ತಿಂಗಳ ಹಿಂದಷ್ಟೆ ಭಾರಿ ಮಳೆಗೆ ಸೇತುವೆ ಕೊಚ್ಚಿಹೋಗಿತ್ತು. ಅತಿಯಾದ ತೇವಾಂಶ ಹಾಗೂ ಕಳಪೆ ಮಟ್ಟದ ರಸ್ತೆಯಿಂದಾಗಿ ಪೋತ್ನಾಳದಿಂದ ಉದ್ಭಾಳಕ್ಕೆ ತೆರಳುತ್ತಿದ್ದ ಕ್ರೇನ್ ಏಕಾಏಕಿ ಕ್ರೇನ್ ರಸ್ತೆ ಪಕ್ಕದಲ್ಲಿ ಪಲ್ಟಿ ಹೊಡೆದದೆ. ದಿನನಿತ್ಯ ಇದೇ ರಸ್ತೆಯಲ್ಲಿ ಹತ್ತರಿಂದ ಇಪ್ಪತ್ತು ಶಾಲಾ ವಾಹನ ಓಡಾಡುತ್ತವೆ. ಭಾರೀ ಅಪಾಯ ತಪ್ಪಿದ್ದು ಮತ್ತಷ್ಟು ಮಣ್ಣು ಕುಸಿದು ಅನಾಹುತ ಸಂಭವಿಸುವ ಮುನ್ನ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.