ಕೋಲಾರದ ಕೊಚಿಮುಲ್ ನಲ್ಲಿ ನಡೆದಿರುವ ಅವ್ಯವಹಾರಗಳನ್ನು ಕೂಡಲೇ ತನಿಖೆ ನಡೆಸಬೇಕೆಂದು ನಗರದಲ್ಲಿ ರೈತ ಸಂಘದಿಂದ ಒತ್ತಾಯ ಕೋಲಾರದ ಹಾಲು ಒಕ್ಕೂಟದಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ದಾಖಲೆಗಳನ್ನು ಹೊಂದಿದ್ದು ಈ ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೊಚಿಮುಲ್ ನಲ್ಲಿ ನಡೆದಿರುವ ಅವ್ಯವಹಾರಗಳನ್ನು ತನಿಖೆ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ ನಾರಾಯಣಗೌಡ ಗುರುವಾರ ಸಂಜೆ 5:00 ಗಂಟೆಯಲ್ಲಿ ಒತ್ತಾಯಿಸಿದ್ದಾರೆ