ಕಲಬುರಗಿ : ನಿರ್ಮಾಣ ಹಂತದ ಸೇತುವೆಗೆ ಬೈಕ್ಕಿ ಡಿಕ್ಕಿಯಾಗಿ ಸವಾರನೋರ್ವ ಸ್ಥಳಸಲ್ಲೆ ದುರ್ಮರಣಕ್ಕಿಡಾದ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕಿಣ್ಣಿಸುಲ್ತಾನ್ ಗ್ರಾಮದ ಬಳಿ ನಡೆದಿದ್ದು, ಆ೨೭ರಂದು ಬೆಳಗ್ಗೆ 7 ಗಂಟೆಗೆ ಮಾಹಿತಿ ಲಭ್ಯವಾಗಿದೆ. ತಡಕಲ್ ಗ್ರಾಮದ ನಿವಾಸಿ ಮಹೇಶ ನೈಕೋಡಿ(23) ಮೃತ ಬೈಕ್ ಸವಾರನಾಗಿದ್ದಾನೆ. ಆಳಂದ ಪಟ್ಟಣದಿಂದ ತಡಕಲ್ ಗ್ರಾಮಕ್ಕೆ ಬೈಕ್ ಮೇಲೆ ತೆರಳುತ್ತಿರೋವಾಗ ಸೇತುವೆ ನಿರ್ಮಾಣಕ್ಕಾಗಿ ತಂದಿದ್ದ ಕಬ್ಬಿಣದ ಸಲಾಕೆಗೆ ಡಿಕ್ಕಿಯಾಗಿದೆ.. ಈ ವೇಳೆ ತೀವ್ರ ರಕ್ತಸ್ರಾವದಿಂದ ಬೈಕ್ ಸವಾರ ಮಹೇಶ್ ಸ್ಥಳದಲ್ಲೆ ಸಾವನ್ನಪ್ಪಿದಾನೆ. ಈ ಬಗ್ಗೆ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ