ಕೊಪ್ಪಳ ನಗರದಲ್ಲಿನ ಗವಿಸಿದ್ದೇಶ್ವರ ಆರ್ಯುವೇದಿಕ ಕಾಲೇಜಿನಲ್ಲಿ ದೈಹಿಕ ವಿಕಲತೆ ಹೊಂದಿದ ಮಕ್ಕಳಿಗೆ ಶಿಕ್ಷಣ ವಸತಿ ನೀಡಿ ಸಮಾಜದಲ್ಲಿ ಸಬಲತೆ ಮಾಡುವ ಉದ್ದೇಶದಿಂದ ದೈಹಿಕ ವಿಕಲತೆ ಹೊಂದಿದ ಮಕ್ಕಳ ಆಯ್ಕೆ ಶಿಬಿರ ಇಂದು ನಡೆಯಿತು. ಸೆಪ್ಟೆಂಬರ್ 07 ರಂದು ಬೆಳಗ್ಗೆ 11 ಗಂಟೆಗೆ ಯಿಂದ ಸಂಜೆ 4-30 ಗಂಟೆಗೆ ಯವರಿಗೆ ವಿಕಲತೆ ಚೇತನಮಕ್ಕಳ ಆಯ್ಕೆ ಶಿಬಿರ ನಡೆಯಿತು. ಈ ಶಿಬಿರಕ್ಕೆ ದೀಪ ಬೆಳಗಿಸುವ ಮೂಲಕ ಅಂತರ ರಾಷ್ಟ್ರೀಯ ಕ್ರೀಡಾಪಟು ಡಾ.ಮಾಲತಿ ಹೊಳ್ಳದ ಅವರು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗವಿಸಿದ್ದೇಶ್ವರ ಆರ್ಯುವೇದಿಕ ಕಾಲೇಜಿನ ಪ್ರಾಚಾರ್ಯರು ಮತ್ತು ಪೊಷಕರು ಮಕ್ಕಳು ಉಪಸ್ಥಿತರಿದ್ದರು