ವಿದ್ಯುತ್ ಲೈನ್ ಗಳು ಶಾರ್ಟ್ ಸರ್ಕ್ಯೂಟ್ ಆಗಿ ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಬ್ಯಾಡಗಿ ತಾಲೂಕು ಅತ್ತಿಕಟ್ಟಿ ಗ್ರಾಮದಲ್ಲಿ ಸಂಭವಿಸಿದೆ. ಬಸವಂತಪ್ಪ ಚಿಕ್ಕಳ್ಳಿ ಎಂಬುವವರ ಮನೆ ಸುಟ್ಟಿದೆ. ಪರಿಣಾಮ ಮನೆಯಲ್ಲಿದ್ದ ಟೀವಿ, ಟ್ರಾಜ್ಯೂರಿ, ನಗದು ಹಣ, ಚಿನ್ನಾಭರಣ ಸೇರಿ ಒಟ್ಟು 9.71 ಲಕ್ಷ ರೂ.ಮೊತ್ತದ ಸಾಮಗ್ರಿ ಸುಟ್ಟು ಹೋಗಿವೆ. ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.