ಕೊಳ್ಳೇಗಾಲ ಪಟ್ಟಣದ ರಾಮಮಂದಿರ ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾಗಿರುವ ಗಣೇಶನಿಗೆ ಮುಸ್ಲಿಂ ಸಮುದಾಯದ ಮುಖಂಡರು ಭೇಟಿ ನೀಡಿ ಪೂಜೆ ಸಲ್ಲಿಸಿ, ಭಾವೈಕ್ಯತೆ ಮತ್ತು ಸೌಹಾರ್ದತೆಯ ಅತ್ಯುತ್ತಮ ಉದಾಹರಣೆಯನ್ನು ಮೆರೆದಿದ್ದಾರೆ. ಆಂಜನೇಯ ದೇವಸ್ಥಾನದ ಪ್ರಧಾನ ಅರ್ಚಕರಾದ ಟಿ.ವಿ.ಎಸ್. ರಾಘವನ್ ರವರು ಪ್ರತಿಷ್ಠಾಪಿಸಿರುವ ಗಣಪತಿಗೆ ಮುಸ್ಲಿಂ ಮುಖಂಡರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ, ಪರಸ್ಪರ ಸಿಹಿ ಹಂಚಿಕೊಂಡರು. ಈ ಮೂಲಕ ಧರ್ಮಗಳ ನಡುವಿನ ಒಗ್ಗಟ್ಟು ಮತ್ತು ಪರಸ್ಪರ ಗೌರವದ ಸಂದೇಶವನ್ನು ಸಾರ್ವಜನಿಕರಿಗೆ ಒದಗಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಶಾಂತರಾಜು, ಅನ್ಸರ್ ಬೇಗ್, ಹಾಗೂ ಮುಖಂಡರಾದ ನಟರಾಜು ಮಾಳಿಗೆ, ಪ್ರಭುಸ್ವಾಮಿ, ಇನಾಯತ್ ಪಾಷ, ಮನ್ಸೂರ್ ಪಾಷ, ಮೊಹಮ್ಮದ್ ಇಮ್ದಾದ್ ಹಾಜರಿದ್ದರು