ಆಗಸ್ಟ್ 21ರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಬಿಬಿಎಂಪಿ ಗಣೇಶ ಹಬ್ಬದ ಸಲುವಾಗಿ ಮಾರ್ಗಸೂಚಿಯನ್ನು ಹೊರಡಿಸಿದೆ. ಮಾರ್ಗಸೂಚಿ ಕಡ್ಡಾಯ ಪಾಲನೆ ಮಾಡಲೇಬೇಕು ಇಲ್ಲದಿದ್ದರೆ ಕ್ರಮದ ಎಚ್ಚರಿಕೆಯನ್ನು ಕೂಡ ಕೊಟ್ಟಿದೆ. ರಾಸಾಯನಿಕ ಯುಕ್ತ ಗಣೇಶ ಪಿಓಪಿ ಗಣೇಶ ಬಳಕೆ ಮಾಡುವ ಹಾಗಿಲ್ಲ. ಪರಿಸರಸ್ನೇಹಿ ಮಣ್ಣಿನ ಗಣೇಶನನ್ನು ಬಳಕೆ ಮಾಡಬೇಕು. ಆಯ ವಾರ್ಡ್ಗಳಲ್ಲಿ ಗಣೇಶನ ವಿಸರ್ಜನೆಗೆ ಅಧಿಕಾರಿಗಳ ನೇತೃತ್ವದಲ್ಲಿ ವ್ಯವಸ್ಥೆ ಮಾಡಲಾಗುತ್ತೆ. ದೊಡ್ಡ ದೊಡ್ಡ ಗಣೇಶನ ಕೂರಿಸುವವರಿಗೆ ವಿಸರ್ಜನೆಗೆ ಸ್ಪೆಷಲ್ ವ್ಯವಸ್ಥೆಯನ್ನು ಕೂಡ ಮಾಡಲಾಗುತ್ತೆ. ಪರಿಸರ ಸ್ನೇಹಿ ಗಣಪನ ಬಳಕೆ ಮಾಡದೆ ಇದ್ದರೆ ಕ್ರಿಮಿನಲ್ ಕೇಸ್ ದಾಖಲಾಗುತ್ತದೆ ಅಂತ ಬಿಬಿಎಂಪಿ ವಾರ್ನಿಂಗ್ ಕೊಟ್ಟಿದೆ