ಕಲಬುರಗಿ : ನಾಡಹಬ್ಬ ದಸರಾ ಉದ್ಘಾಟನೆ ಕಾರ್ಯಕ್ರಮಕ್ಕೆ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್‌ರನ್ನ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸ್ತಿರೋದಕ್ಕೆ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ರಂಜಾನ್ ದರ್ಗಾ ಕಿಡಿಕಾರಿದ್ದಾರೆ.. ಆ30 ರಂದು ಮಧ್ಯಾನ 2 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಬಾನು ಮುಷ್ತಾಕ್‌ರನ್ನ ವಿರೋಧಿಸುವ ಮುನ್ನ ಬಿಜೆಪಿ ಈ ದೇಶವನ್ನ ಮೊದಲು ಅರ್ಥ ಮಾಡಿಕೊಳ್ಳಲಿ ಅಂತಾ ತಿರುಗೇಟು ನೀಡಿದ್ದಾರೆ.. ಈ ಹಿಂದೆ ದಸರಾ ಉತ್ಸವ ಮೆರವಣಿಗೆ ಅಂಬಾರಿ ಜೊತೆ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್‌ರನ್ನ ಮಹಾರಾಜರು ಕೂಡಿಸಿಕೊಂಡಿದ್ದರು.. ಅಷ್ಟೇ ಅಲ್ಲದೇ ನಿಸಾರ್ ಅಹ್ಮದ್ ಕೂಎ ದಸರಾ ಉದ್ಘಾಟನೆ ಮಾಡಿದ್ದರೆಂದ ಬಿಜೆಪಿಗೆ ರಂಜಾನ್ ದರ್ಗಾ ಇತಿಹಾಸ ಪಾಠ ಹೇಳಿದ್ದಾರೆ