ಬಜಾಜ್ ಫೈನಾನ್ಸ್ ನಿಂದ ಪರ್ಸನಲ್ ಲೋನ್ ಇದೆ ಅಂತ ಕರೆ ಮಾಡಿ ಹಣವನ್ನ ವಂಚನೆ ಮಾಡಲಾಗಿದೆ. ವಿಜಯನಗರದ ನಿವಾಸಿ ಸತೀಶ್ ರವರಿಗೆ 93,400 ಹಣ ವಂಚನೆಯಾಗಿದೆ. ಸತೀಶ್ ಅವರ ಮೊಬೈಲ್ ಗೆ ಕರೆ ಮಾಡಿದಂತ ವ್ಯಕ್ತಿ ನಾನು ಬಜಾಜ್ ಫೈನಾನ್ಸ್ ನಿಂದ ಮಾತ್ನಾಡ್ತಿದ್ದೇನೆ. ನಿಮಗೆ ಹತ್ತು ಲಕ್ಷ ಪರ್ಸನಲ್ ಲೋನ್ ಇದೆ ಅಂತ ಹೇಳಿದ್ದಾನೆ. ಇದಕ್ಕೆ ಒಪ್ಪಿದ ಸತೀಶ್ ಅವರು ಕೇಳಿದ ದಾಖಲೆಗಳನ್ನ ಸಲ್ಲಿಕೆ ಮಾಡಿದ್ದಾನೆ. ಇದಾದ ನಂತರ ಜಿಎಸ್‌ಟಿ ಚಾರ್ಜಸ್ ಅಂತ ಹೇಳಿ ಹಂತ ಹಂತವಾಗಿ ಹಣವನ್ನ ಹಾಕಿಸಿಕೊಂಡು ವಂಚನೆ ಮಾಡಿದ್ದಾರೆ. ಈ ಸಂಬಂಧ ರಾಮನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.