ಕಲಬುರಗಿಯಲ್ಲಿ ಪಾನಿಪುರಿ ವ್ಯಾಪಾರಿ ಸೈಬರ್ ವಂಚಕರ ಬಲೆಗೆ ಬಿದ್ದು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ತೇಲಗಾಂವ ಗ್ರಾಮದ ಅಪ್ಪಾರಾವ ಸೋಪುರೆ (38) ಎಂಬುವವರು, ಪಿಎಂ ಕಿಸಾನ್ ಯೋಜನೆಗೆ ಸಂಬಂಧಿಸಿದೆಂದು ಬಂದ ನಕಲಿ ವಾಟ್ಸಪ್ ಲಿಂಕ್ ಕ್ಲಿಕ್ ಮಾಡಿದ ತಕ್ಷಣ ಮೊಬೈಲ್ ಹ್ಯಾಕ್ ಆಗಿ, 16ರಿಂದ 20 ಜುಲೈ ನಡುವೆ ಯುಪಿಐ ಮೂಲಕ ಒಟ್ಟು ₹3,93 ಲಕ್ಷ ಹಣ ಖಾತೆಯಿಂದ ವರ್ಗಾವಣೆಗೊಂಡಿದೆ. ಇದೀಗ ಬ್ಯಾಂಕ್ ಸ್ಟೇಟ್‌ಮೆಂಟ್ ತೆಗೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ದೂರು ಸಿ.ಇ.ಎನ್ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 84/2025ರಂತೆ ಐಟಿ ಕಾಯ್ದೆ ಮತ್ತು ಬಿ.ಎನ್.ಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.