ಮದ್ದೂರಿನಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆಯಲ್ಲಿ ನಡೆದ ಗಲಾಟೆ ಪ್ರಕರಣದ ಕುರಿತು ಮಾತನಾಡಿದ ಬಿಜೆಪಿಯ ಎಂಎಲ್ಸಿ ಸಿ.ಟಿ ರವಿ ಕಿಡಿಗೇಡಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಕಳೆದ ಬಾರಿ ನಾಗಮಂಗಲದಲ್ಲಿ ಪೆಟ್ರೋಲ್ ಬಂಕ್ ಹಾಕಿದ್ದರೂ ಅದನ್ನು ಪ್ರತಿಭಟಿಸಿದವರ ಮೇಲೆ ಕೇಸ್ ಹಾಕಲಾಗಿತ್ತು ಈ ರೀತಿಯಾದ ನಿಮ್ಮ ಖಾಜಿ ನೀತಿಯಿಂದಾಗಿ ಇಂದು ಬಾಲ ಬಿಚ್ಚುತ್ತಿದ್ದಾರೆ. ಇನ್ನೇನಿದ್ದರೂ ನಮ್ಮದು ಆಕ್ಷನ್ ಗೆ ರಿಯಾಕ್ಷನ್ ನೀತಿಯನ್ನು ಅನುಸರಿಸುವುದು ಅಷ್ಟೇ ಬಾಕಿ ಎಂದು ಸಿ.ಟಿ ರವಿ ವಾರ್ನಿಂಗ್ ಮಾಡಿದರು.