ಗಣೇಶ ಹಬ್ಬ ಮತ್ತು ಈದ್-ಮಿಲಾದ್ ಹಿನ್ನೆಲೆ ಮುಳಬಾಗಿಲು ನಗರದಲ್ಲಿ ಪೊಲೀಸರಿಂದ ರೂಟ್ ಮಾರ್ಚ್ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳು ಬರುತ್ತಿದ್ದು ಪ್ರತಿಯೊಬ್ಬರು ಸಹಬಾಳ್ವೆಯಿಂದ ಹಬ್ಬಗಳನ್ನು ಆಚರಿಸಬೇಕೆಂದು ಮುಳಬಾಗಿಲು ತಾಲ್ಲೂಕಿನಲ್ಲಿ ಹಿಂದಿನಿಂದಲ್ಲೂ ಶಾಂತಿ ಸಹಬಾಳ್ವೆಯಿಂದ ಜನರು ಹಬ್ಬವನ್ನು ಆಚರಿಸಿಕೊಂಡು ಬರುತ್ತಿದ್ದು ಅದನ್ನು ಮುಂದುವರೆಸಿಕೊಂಡು ಹೋಗುವಂತೆ ಪೊಲೀಸರು ಕರೆ ನೀಡಿದರು. ಮುಳಬಾಗಿಲು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಗುರುವಾರ ಸಮಯದಲ್ಲಿ ಎಸ್ಪಿ ನಿಖಿಲ್ ನೇತೃತ್ವದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ವಿಶೇಷ ಕಾರ್ಯಪಡೆ ಅಧಿಕಾರಿ ಸಿಬ್ಬಂದಿಗಳನ್ನೊಳಗೊಂಡ ತಂಡ ಸಾರ್ವಜನಿಕರಿಗೆ ವಿಶ್ವಾಸ ಮೂಡಿಸುವ ಉದ್ದೇಶದಿಂದ ರೂಟ್ ಮಾರ್ಚ್ ನಡೆಸಿದದರು.