ಬಲಶೆಟ್ಟಿಹಾಳ ಗ್ರಾಮದಲ್ಲಿ ಕುಂಬಾ ಕಳಸದೊಂದಿಗೆ ಶ್ರೀ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅದ್ದೂರಿ ಮೆರವಣಿಗೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಬಲಶೆಟ್ಟಿಹಾಳ ಗ್ರಾಮದ ಶ್ರೀ ಗುರು ಬಸವಲಿಂಗ ಶಿವಯೋಗಿಗಳವರ ವಿರಕ್ತ ಮಠ ಬಲಶೆಟ್ಟಿಹಾಳ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಅಮಾವಾಸ್ಯೆಯ ಅಂಗವಾಗಿ ಬಲಶೆಟ್ಟಿಹಾಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮದ ಮಹಿಳೆಯರಿಂದ ಕುಂಭ ಕಳಸದೊಂದಿಗೆ ಶ್ರೀ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು ಮೆರವಣಿಗೆ ಉದ್ದಕ್ಕೂ ಡೊಳ್ಳು ಕುಣಿತ ನೋಟಗರ ಕಣ್ಮನ ಸೆಳೆಯಿತು. ಸಂದರ್ಭದಲ್ಲಿ ಪೂಜ್ಯರು ಸುತ್ತಮುತ್ತಲಿನ ಗ್ರಾಮದ ಭಕ್ತಾದಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು