ರೈತರಿಗೆ ಸಮರ್ಪಕವಾದ ರಸಗೊಬ್ಬರವನ್ನು ನೀಡುವಂತೆ ಶಾಸಕ ಬಸನಗೌಡ ದದ್ದಲ್ ತಿಳಿಸಿದರು. ಮಂಗಳವಾರ ಮಧ್ಯಾನ ರಾಯಚೂರ ನಗರದ ತಾಲೂಕ ಪಂಚಾಯಿತಿ ಕಚೇರಿಯಲ್ಲಿ ನಡೆದ ಮೂರು ತಿಂಗಳುಗಳ ಪ್ರಗತಿ ಪರಿಶೀಲನೆಯ ಕೆಡಿಪಿ ಸವಿಯಲ್ಲಿ ಭಾಗವಹಿಸಿ ಮಾತನಾಡಿ, ರೈತರು ಸರದಿ ಸಾಲಿನಲ್ಲಿ ನಿಲ್ಲುವಂತಾಗಬಾರದು, ಯಾವುದೇ ರೈತರಿಗೆ ಅಗತ್ಯವಿರುವಷ್ಟು ಗೊಬ್ಬರ ನೀಡುವಲ್ಲಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಕೂಡ ಉಪಸ್ಥಿತರಿದ್ದರು.