ಈ ಬಾರಿ ಮೈಸೂರು ದಸರಾ ಉತ್ಸವದ ಉದ್ಘಾಟನೆಯನ್ನು ಭಾನು ಮುಸ್ತಾಕ್ ಅವರ ಕಡೆಯಿಂದ ಉದ್ಘಾಟನೆ ಮಾಡಿಸುತ್ತಿದ್ದಾರೆ. ಸರ್ಕಾರಕ್ಕೆ ಸಾಬರನ್ನ ಬಿಟ್ರೆ ಬೇರೆ ಯಾರು ಸಿಗಲೇ ಇಲ್ವಾ..? ಭಾನು ಮುಸ್ತಾಕ್ ಅವರನ್ನ ಬೇಕಿದ್ದರೆ ಸರ್ಕಾರ ಮುಸ್ಲಿಂ ಊರಸ್ ಗೆ ಉದ್ಘಾಟನೆಯನ್ನು ಮಾಡಿಸಲಿ ಎಂದು ಕೊಪ್ಪಳದಲ್ಲಿ ಸೋಮವಾರ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ ಆಕ್ರೋಶವನ್ನು ಹೊರಹಾಕಿದ್ದಾರೆ. ಅವರು ಹಿಂದೂ ಧರ್ಮವನ್ನ ಒಪ್ಪಿಕೊಂಡು ಪೂಜೆ ಮಾಡುವುದಾದರೆ ದಸರಾ ಉದ್ಘಾಟನೆಯನ್ನು ಮಾಡಲಿ ಎಂದು ರಾಜ್ಯ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನವನ್ನು ಅರವಿಂದ್ ಬೆಲ್ಲದ ಹೊರ ಹಾಕಿದ್ದಾರೆ.