ಕಲಬುರಗಿ : ಕಲಬುರಗಿ ಜಿಲ್ಲೆಯಾದ್ಯಂತ ಭೀಮಾ ನದಿ ಪ್ರವಾಹ ಜನರ ಬದುಕಷ್ಟೆ ಅಲ್ಲ.. ದೇವಸ್ಥಾನವನ್ನೆ ನಂಬಿದ್ದ ಭಕ್ತರ ದಾಸೋಹಕ್ಕೂ ಜಲ ಕಂಟಕ ಎದುರಾಗಿದೆ.. ಹೌದು. ಜೇವರ್ಗಿ ತಾಲೂಕಿನ ಭೋಜಲಿಂಗೇಶ್ವರ ದೇವಸ್ಥಾನಕ್ಕೆ ಭೀಮಾ ನದಿ ಪ್ರವಾಹ ಹೊಕ್ಕಿದ್ದು, ಇಡೀ ದೇವಸ್ಥಾನವನ್ನೆ ಭೀಮಾ ನದಿ ಆವರಿಸಿದೆ.. ಸೆ29 ರಂದು ಮಧ್ಯಾನ 3 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಭೀಮಾ ನದಿ ಪ್ರವಾಹ ದೇವಸ್ಥಾನಕ್ಕೆ ನುಗ್ಗಿದ ಪರಿಣಾಮ ದೇವಸ್ಥಾನದಲ್ಲಿ ದಾಸೋಕ್ಕೆಂದು ಸಂಗ್ರಹಿಸಿ ಇಡಲಾಗಿದ್ದ ದವಸಧಾನ್ಯಗಳು ನೀರು ಪಾಲಾಗಿವೆ..