ಮೊಳಕಾಲ್ಮುರು:- ಪಟ್ಟಣದ ಭರಮಪ್ಪನಕಟ್ಟೆ ಸಮೀಪದ ಬಿಕೆಬಿ ಬಾಯ್ಸ್ ನೇತೃತ್ವದಲ್ಲಿ ಶ್ರೀ ಬಾಲ ವಿನಾಯಕ ಸೀಮಾ ಸೇವಾ ಸಮಿತಿಯಿಂದ 26ನೇ ವರ್ಷದ ಪ್ರಯುಕ್ತವಾಗಿ ಗಣಪನನ್ನು ಪ್ರತಿಷ್ಠಾಪಿಸಲಾಯಿತು. ಗಣಪನನ್ನು ಪ್ರತಿಷ್ಠಾಪಿಸಿ ವಿವಿಧ ಪೂಜಾ ಕೈಂಕಾ ಕಾರ್ಯಗಳನ್ನು ಪ್ರತಿನಿತ್ಯ ನೆರವೇರಿಸಲಾಯಿತು,ಗಣೇಶ ಚತುರ್ಥಿ ಹಬ್ಬದ ಕೊನೆಯ ದಿನಗಳಲ್ಲಿ ಭಕ್ತರು ಭಕ್ತಿಭಾವದಿಂದ ಸನಾತನ ಸಂಪ್ರದಾಯದಂತೆ ಪಲ್ಲಕ್ಕಿಯಲ್ಲಿ ಗಣೇಶನನ್ನು ಮೆರವಣಿಗೆಯಲ್ಲಿ ಸಾಗಿಸಿ ವಿಸರ್ಜನೆ ಮಾಡಿದರು.ಈ ಸಂದರ್ಭದಲ್ಲಿ ಪಲ್ಲಕ್ಕಿಯನ್ನು ಹೂವಿನಿಂದ ಅಲಂಕರಿಸಲಾಗಿತ್ತು, ಅಲಂಕರಿಸಲಾಗಿದ್ದ ಪಲ್ಲಕ್ಕಿಯಲ್ಲಿ ಗಣೇಶನನ್ನು ಕೂರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಜೆ ಶೋಭಾಯಾತ್ರೆ ನಡೆಸಲಾಯಿತು.