ಅಜ್ಜಿ ಮನೆಯಲ್ಲಿಟ್ಟಿದ್ದ 11 ಲಕ್ಷ ರೂ. ಮೌಲ್ಯದ ಚಿನ್ನ, ಹಣವನ್ನು ಮೊಮ್ಮಗಳು ಮತ್ತು ಪ್ರಿಯಕರ ಯಾಮಾರಿಸಿರುವ ಘಟನೆ ದುದ್ದ ಗ್ರಾಮದಲ್ಲಿ ಜರುಗಿದೆ. ಕಮಲಮ್ಮ ಎಂಬುವವರು ತನ್ನ ಮಗಳು ಸುಧಾ ಅವರಿಗೆ ಸೇರಿದ ಒಡವೆಗಳನ್ನು ತನ್ನ ಇಟ್ಟುಕೊಂಡು ಕಳೆದುಕೊಂಡವರು. ಕಮಲಮ್ಮ ಅವರ ಮೊಮ್ಮಗಳು ಕಡತನಾಳು ಸ್ಪಂದನಾ ಹಾಗೂ ಆಕೆ ಪ್ರೀತಿಸುತ್ತಿದ್ದ ಹುಡುಗ ಬೀಚನಹಳ್ಳಿ ಗಿರೀಶ್ ಅವರು ಸೇರಿಕೊಂಡು ಅಜ್ಜಿ ಒಡವೆ ಇಟ್ಟಿದ್ದ ಬೀರು ತೆಗೆದು 10 ಲಕ್ಷ ಮೌಲ್ಯದ 104.65 ಗ್ರಾಂ ತೂಕದ ಒಡವೆಗಳು ಹಾಗೂ 1 ಲಕ್ಷ ನಗದು ತೆಗೆದುಕೊಂಡಿದ್ದಾರೆ. ಬಳಿಕ ಅ ಜಾಗದಲ್ಲಿ ನಕಲಿ ಒಡವೆ ಇಟ್ಟು ಕೇಳಿದಾಗ ನಾನೇ ತೆಗೆದುಕೊಂಡಿದ್ದೇನೆ ಹಾಗೂ ವಾಪಾಸ್ಸು ನೀಡುತ್ತೇವೆಂದು ಹೇಳಿ ಕೊಡದೇ ಮೋಸ ಮಾಡಿದರೆಂದು ದೂರಿನಲ್ಲಿ ತಿಳಿಸಿದ್ದಾರೆ.