ಕಲಬುರಗಿ : ಭೀಮಾ ನದಿ ರಕ್ಕಸ ಪ್ರವಾಹದಿಂದ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಬಳಿಯ ಭೀಮಾ ನದಿ ಸೇತುವೆ ಜಲಾವೃತವಾದ ಪರಿಣಾಮ ಹೆದ್ದಾರಿ ಬಂದ್ ಆಗಿದ್ದು, ಆಹಾರ ನೀರು ಇಲ್ಲದೇ ಪರದಾಡ್ತಿದ್ದ ಡ್ರೈವರ್‌ಗಳಿಗೆ ಜೇವರ್ಗಿ ಮುಸ್ಲಿಂ ಸಂಘಟನೆ ಯುವಕರು ಆಹಾರ, ಹಣ್ಣು, ವಾಟರ್ ಬಾಟಲ್ ಪೂರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ.. ಸೆ29 ರಂದು ಮಧ್ಯಾನ 3 ಗಂಟೆಗೆ ಮಾಹಿತಿ ಲಭ್ಯವಾಗಿದೆ. ಸೇತುವೆ ಬಂದ್ ಪರಿಣಾಮ ಕಳೆದ ಮೂರು ದಿನಗಳಿಂದ ಕಿಲೋಮೀಟರ್ ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿವೆ..