ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿರುವ ಅರ್ಚರಿ ಮತ್ತು ಫೆನ್ಸಿಂಗ್ ಕ್ರೀಡಾಶಾಲೆಗೆ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಭೇಟಿ ನೀಡಿ ಪರಿಶೀಲಿಸಿದರು. ಕ್ರೀಡಾಪಟುಗಳೊಂದಿಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಕ್ರೀಡಾ ನಿಲಯದಲ್ಲೇ ಉಪಹಾರ ಸೇವಿಸಿದರು. ಬಳಿಕ ಸಂವಾದ ನಡೆಸಿದ ಅವರು, ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು. ಇದಕ್ಕಾಗಿ ದಿನನಿತ್ಯ ತಪ್ಪದೇ ಶ್ರಮವಹಿಸಿ ತರಬೇತಿ ಪಡೆಯಬೇಕು. ಕ್ರೀಡಾನಿಲಯದಲ್ಲಿ ಯಾವುದೇ ತೊಂದರೆ ಸಮಸ್ಯೆಗಳು ಇದ್ದರೆ ಮುಕ್ತವಾಗಿ ಹೇಳಬೇಕು. ಕ್ರೀಡಾ ಚಟುವಟಿಕೆಗಳಿಗೆ ಪೂರಕವಾದ ಎಲ್ಲ ಸೌಲಭ್ಯ ಒದಗಿಸಲಾಗುತ್ತಿದೆ. ಈ ಸೌಕರ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ರಾಷ್ಟ್ರಮಟ್ಟದಲ್ಲಿ ಕೀರ್ತಿ ತರುವಂತಾಗಬೇಕು ಹಾರೈಸಿದರು.