ಧರ್ಮಸ್ಥಳದ ಮೇಲಿನ ಆಪಾದನೆ ಸುಳ್ಳು ಎಂದು ತಿಳಿದು ಧರ್ಮಸ್ಥಳದ ಭಕ್ತರಾದ ನಮ್ಮೆಲ್ಲರಿಗೂ ಬಹಳಷ್ಟು ಸಮಾಧಾನ ತಂದಿದೆ ಎಂದು ಸಚಿವ ಎಚ್.ಕೆ ಪಾಟೀಲ ತಿಳಿಸಿದರು. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ ವಿಷಯದಲ್ಲಿ ಅನುಮಾನ ಪಟ್ಟವರು ಬಹಳಷ್ಟು ಕಡಿಮೆ ಜನರು. ಆರೋಪಗಳು ಹಾಗೂ ಗೊಂದಲಗಳು ಸುಳ್ಳು ಎಂದು ತಿಳಿದು ಭಕ್ತರಿಗೆ ಬಹಳಷ್ಟು ಸಮಾಧಾನವಾಗಿದೆ ಎಂದರು.