ಕೋಮು ಸೂಕ್ಷ್ಮ ಪ್ರದೇಶವಾದ ಶಿವಮೊಗ್ಗದಲ್ಲಿ ಕೋಮು ಸೌಹಾರ್ದತೆ ಕಂಡುಬಂದಿದೆ.ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಪಾಳದ ಸಿದ್ದೇಶ್ವರ ಸರ್ಕಲ್ ನಲ್ಲಿ ಗಣಪತಿ ವಿಸರ್ಜನಾ ಪೂರ್ವ ಮೆರವಣಿಗೆಯಲ್ಲಿ ಸ್ಥಳೀಯ ಮುಸ್ಲಿಂ ಬಾಂಧವರಾದ ಜಫ್ರುಲ್ಲಾ,ರಿಜ್ವಾನ್,ಮಕ್ಸೂದ್ ಉಬೇದ್ ಹಾಗೂ ಇತರರಿಂದ ಗಣಪತಿಗೆ ಹೂವಿನ ಹಾರ ಹಾಕಲಾಯಿತು. ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಮುಸ್ಲಿಂ ಬಾಂಧವರು ಭಾವೈಕ್ಯತೆ ಸಾರಿದ್ದಾರೆ. ಈ ಘಟನೆ ಶನಿವಾರ ನಡೆದಿದ್ದು,ಭಾನುವಾರ ವಿಡಿಯೋ ವೈರಲ್ ಆಗಿದೆ.