ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಹೊರಕೆರೆ ಗ್ರಾಮದ ಉಮಾಶಂಕರ ಎಂಬುವವರ ಮನೆಯಲ್ಲಿ ಕಳ್ಳತನವಾದ 24 ಗಂಟೆಯಲ್ಲೇ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಗಂಗಾವತಿಯ ಹನೀಫ್, ಗೌಸ್, ಸುಹೇಲ್ ಬಂಧಿತ ಆರೋಪಿಗಳು. ಆರೋಪಿತರಿಂದ 1.85 ಲಕ್ಷ ರೂ ಬೆಳ್ಲಿಯ ಸಾಮಾನುಗಳು, ಸ್ಕೂಟಿ, ಕಬ್ಬಿಣದ ರಾಡನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿತರು ಹೆದ್ದಾರಿ ದಡೋರೆ ಸೇರಿದಂತೆ ಒಟ್ಟು 7 ಪ್ರಕರಣಗಳಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ದಾವಣಗೆರೆ ನಗರದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಭಾನುವಾರ ಸಂಜೆ 4 ಗಂಟೆಗೆ ತಿಳಿಸಿದೆ.