ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರನ್ನು ಬೆಂಗಳೂರಿನ ಅಪೊಲೊ ಆಸ್ಪತ್ರೆಗೆ ತೆರಳಿ, ಬೀದರ್ ಜಿಲ್ಲಾ ಉಸ್ತುವಾರಿ ಮಂತ್ರಿ ಈಶ್ವರ ಖಂಡ್ರೆ ಅವರು ಸೋಮವಾರ ಬೆಳಗ್ಗೆ 9ಕ್ಕೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದರು. ಪ್ರಕೃತಿಯನ್ನು ಉಳಿಸಿದವರಿಗೆ ಪ್ರಕೃತಿ ಮಾತೆ ಯಾವತ್ತು ಕೈ ಬಿಡಲ್ಲ ಎಂದವರು ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿನ ವೈದ್ಯರಿಗೆ ಸೂಚಿಸಿದರು. ಬಳಿಕ ತಿಮ್ಮಕ್ಕ ಪಾದಸ್ಪರ್ಷಿಸಿ ಆಶೀರ್ವಾದ ಪಡೆದರು.