ದಸರಾ ಲಾಂಛನ ಬಿಡುಗಡೆ ಸಮಯದಲ್ಲಿ ವೇದಿಕೆ ಭಾಷಣದಲ್ಲಿ ಬಿಜೆಪಿ ಶಾಸಕ ಸುರೇಶ್ ಗೌಡ ಪರಮೇಶ್ವರ್ ಪರ ಬ್ಯಾಟಿಂಗ್ ಬೀಸಿದರೆ ಇದನ್ನ ಕಂಡು ಕುಣಿಗಲ್ ಕಾಂಗ್ರೆಸ್ ಶಾಸಕ ಸುರೇಶ್ ಗೌಡ ಅವರ ಕಾಲೆಳೆಯುವ ಪ್ರಯತ್ನ ನಾಟಕೀಯ ರಾಜಕೀಯದಾಟ ನಡೆಯಿತು. ತುಮಕೂರಿನ ಕೇಂದ್ರ ಗ್ರಂಥಾಲಯದಲ್ಲಿ ಸೋಮವಾರ ಮಧ್ಯಾಹ್ನ 1 ರ ಸಮಯದಲ್ಲಿ ಶಾಸಕ ಸುರೇಶ್ ಗೌಡ ಮಾತನಾಡುತ್ತ ತುಮಕೂರಿನಲ್ಲಿ ಅದ್ದೂರಿ ದಸರಾ ಆಚರಿಸುತ್ತಿರುವ ಸಚಿವ ಪರಮೇಶ್ವರ್ ಅವರಿಗೆ ಮುಂದಿನ ವರ್ಷವಾದರು ಮುಖ್ಯಮಂತ್ರಿಯಾಗಿ ಮೈಸೂರು ದಸರಾದಲ್ಲಿ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಯೋಗ ಸಿಗಲಿ ಎಂದರು. ಈ ಹೇಳಿಕೆ ನೀಡಿದ್ದು ಬಹುಷಃ ಕುಣಿಗಲ್ ಶಾಸಕ ಡಾ. ಹೆಚ್. ಡಿ. ರಂಗನಾಥ್ ಗೆ ನೋವಾಗಬಹುದು ಎಂದು ಹೇಳಿದರು.