ಜೆಜೆಎಂ ಕಳಪೆ ಕಾಮಗಾರಿ : ಕರಿಪಲ್ಲಿ ಗ್ರಾಮಸ್ಥರ ಆರೋಪ ಕೇಂದ್ರಸರ್ಕಾರ ಹಾಗೂ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾಗಿರುವ ಜಲಜೀವನ್ ಮಿಷನ್ ಯೋಜನೆ ಸಂಪೂರ್ಣವಾಗಿ ಕಳಪೆ ಕಾಮಗಾರಿಯಾಗಿದೆ ಎಂದು ಶನಿವಾರ ಸಂಜೆ 5:30ರ ಸಮಯದಲ್ಲಿ ಗಂಗಾಧರ್ ಆರೋಪಿಸಿದ್ದಾರೆ. ಶ್ರೀನಿವಾಸಪುರ ತಾಲ್ಲೂಕಿನ ಕೋಡಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರಿಪಲ್ಲಿ ಗ್ರಾಮದ ಗ್ರಾಮಸ್ಥರಾದ ಗಂಗಾಧರ್ ಮಾತನಾಡಿ ನಮ್ಮ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ಮಾಡಿರುವಂತಹ ಕಾಮಗಾರಿ ಸಂಪೂರ್ಣವಾಗಿ ಕಳಪೆ ಕಾಮಗಾರಿಯಾಗಿದೆ ಸಿಮೆಂಟ್ ಸಂಪೂರ್ಣವಾಗಿ ಮಳೆ ನೀರಿನಿಂದಲೇ ಕಿತ್ತು ಹೋಗುತ್ತಿದ್ದು, ಪೈಪ್ಲೈನ್ ಸಹ ಮೇಲ್ಭಾಗದಲ್ಲಿ ಅಳವಡಿಸಿದ್ದಾರೆ ಪೈಪ್ ಸಂ