ರಾಯಚೂರು ಜಿಲ್ಲೆಯ ಮಸ್ಕಿಪಟ್ಟಣದ ಕಸವನ್ನು ತಂದು 30 ಕಿಲೋಮೀಟರ್ ದೂರದಲ್ಲಿರುವ ರೈತರ ಜಮೀನಿನಲ್ಲಿ ಹಾಕಲಾಗುತ್ತಿದ್ದು ಇದನ್ನು ವಿರೋಧಿಸಿ ನಾಳೆ ರಾಯಚೂರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶರಣಪ್ಪ ತಿಳಿಸಿದ್ದಾರೆ. ರಾಯಚೂರು ನಗರದಲ್ಲಿ ಸೋಮವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ರೈತ ಸಂಘದ ಇತರೆ ಮುಖಂಡರು ಕೂಡ ಉಪಸ್ಥಿತರಿದ್ದರು.