ಗಣೇಶ ಮೆರವಣಿಗೆಯಲ್ಲಿ ಸಂಭವಿಸಿದ ದುರಂತದಲ್ಲಿ ಬಳ್ಳಾರಿ ಜಿಲ್ಲೆಯ ನಾಗಲಕೆರೆಯ ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಪ್ರವೀಣ್ ಕುಮಾರ್ (21) ಪ್ರಾಣ ಕಳೆದುಕೊಂಡಿದ್ದಾರೆ.ಮೃತ ಪ್ರವೀಣ್ ಕುಮಾರ್ ಅವರು ಕೊನೆಯ ಉಸಿರಿನಲ್ಲಿ ತಮಗಿರುವ ಏಕೈಕ ತಾಯಿಯ ಕುರಿತು ಚಿಂತಿಸಿ, “ನಾನು ಇಲ್ಲದಿದ್ದರೆ ನನ್ನ ತಾಯಿಯನ್ನು ಚೆನ್ನಾಗಿ ನೋಡ್ಕೊಳ್ಳಿ, ನನ್ನ ತಾಯಿಗೆ ನಾನು ಬಿಟ್ರೆ ಬೇರೆ ಯಾರು ಇಲ್ಲ” ಎಂದು ಕಣ್ಣೀರಿನಲ್ಲಿ ತಮ್ಮ ಕೊನೆಯ ಮಾತುಗಳನ್ನು ಹೇಳಿದರೆಂದು ಕುಟುಂಬಸ್ಥರು ತಿಳಿಸಿದರು.ಸೆಪ್ಟಂಬರ್ 13, ಶನಿವಾರ ಬೆಳಿಗ್ಗೆ 10ಗಂಟೆಗೆ, ಪ್ರವೀಣ್ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮ ನಾಗಲಕೆರೆಗೆ ತರಲಾಗಿದ್ದು, ಗ್ರಾಮಸ್ಥರು, ಬಂಧು-ಬಳಗ, ಸ್ನೇಹಿತರು ಕಣ್ಣೀರಿನ ನಮನ ಸಲ್ಲಿಸಿದರು. ಏಕೈಕ ಮಗನನ್ನು ಕಳೆದುಕೊಂಡ ತಾಯಿಯ ಆಕ್ರಂದನಕ್ಕೆ