ವಾಹನಗಳ ವಾರಸುದಾರರ ಪತ್ತೆಗಾಗಿ ಮನವಿ ಆಂಡ್ರಸನ್ಪೇಟೆ ಪೊಲೀಸರ ಮನವಿ ಕೆಜಿಎಫ್ ನ ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಆಂಡ್ರಸನ್ಪೇಟೆ ಠಾಣಾ ಸರಹದ್ದಿನ ಹಾದಿ ಬೀದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಲ್ಲಿಸಿ ಹೊರಟು ಹೋಗಿರುವ ದ್ವಿಚಕ್ರ ವಾಹನಗಳು ಇದ್ದು, ಇದುವರೆವಿಗೂ ದ್ವಿಚಕ್ರ ವಾಹನಗಳ ವಾರಸುದಾರರುಗಳು ಬಂದು ಕ್ಲೈಮ್ ಮಾಡದೆ ಇರುವ ದ್ವಿಚಕ್ರ ವಾಹನ ದ ವಾರಸ್ಸುದಾರರು ಠಾಣೆಗೆ ಸಂಪರ್ಕಿಸಿ ದಾಖಲಾತಿಗಳನ್ನು ನೀಡಿ, ತಮ್ಮ ವಾಹನಗಳನ್ನು ಪಡೆದುಕೊಳ್ಳಬಹುದೆಂದು ಠಾಣೆಯ ಪೊಲೀಸ್ ಸಬ್ಇನ್ಸ್ಪೆಕ್ಟರ್ ಅವರು ಮಂಗಳವಾರ ರಾತ್ರಿ 8 ಗಂಟೆಯಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.