ಹನೂರು ತಾಲೂಕಿನ ಕಾಂಚಳ್ಳಿ ಗ್ರಾಮದ ಸಮೀಪದ ಜಮೀನೊಂದರಲ್ಲಿ ಮೇವಿನ ಹುಡುಕಾಟಕ್ಕೆ ಆಗಮಿಸಿದ್ದ ಕಾಡಾನೆಯೊಂದು ರೈತರ ಸಮಯಪ್ರಜ್ಞೆಯಿಂದ ಹೆಚ್ಚಿನ ಹಾನಿಯಿಲ್ಲದೇ ಮತ್ತೆ ಕಾಡಿನತ್ತ ಓಡಿದೆ. ಕಾಂಚಳ್ಳಿ ಗ್ರಾಮದ ನಾಗರಾಜು ಎಂಬ ರೈತನ ಜಮೀನಿನ ಬಳಿ ಇರುವ ಉಡುತೊರೆಹಳ್ಳ ಜಲಾಶಯದ ದಡದಿಂದ ಕಾಡಿನಿಂದ ಬಂದ ಕಾಡಾನೆಯು ಜಮೀನಿಗೆ ಲಗ್ಗೆ ಇಟ್ಟಿತ್ತು. ಈ ವೇಳೆ ಸುತ್ತಮುತ್ತಲ ರೈತರು ತಕ್ಷಣವಾಗಿ ಒಂದಾಗಿ, ಬ್ಯಾಟರಿ ದೀಪಗಳು ಹಾಗೂ ಚೀರಾಟದ ಮೂಲಕ ಶಬ್ದ ಮಾಡಿ ಕಾಡಾನೆಯನ್ನು ಮತ್ತೆ ಕಾಡಿನತ್ತ ಹಿಮ್ಮೆಟ್ಟಿಸಿದರು.