ಮಾಜಿ ಸಚಿವ ಹಾಗೂ ಶಾಸಕ ಕೆ.ಗೋಪಾಲಯ್ಯ ಅವರ ನೇತೃತ್ವದಲ್ಲಿ ಶ್ರೀ ಮಹಾಲಕ್ಷ್ಮಿ ಎಜುಕೇಷನಲ್ ಟ್ರಸ್ಟ್ ವತಿಯಿಂದ 160 ಜನ ಕ್ಷಯ ರೋಗಿಗಳಿಗೆ ಪೌಷ್ಟಿಕಾಂಶದ ಫುಡ್ ಕಿಟ್ ಅನ್ನು ರಾಜ್ಯಸಭಾ ಸದಸ್ಯ ಹಾಗೂ ಬಿಜೆಪಿ ರಾಜ್ಯ ಉಸ್ತುವಾರಿ ಡಾ. ರಾಧಾ ಮೋಹನ್ ದಾಸ್ ಅಗರವಾಲ್ ಅವರು ಭಾನುವಾರ ಮಧ್ಯಾಹ್ನ 2 ಗಂಟೆ ಸು.ಅರಿಗೆ ವಿತರಿಸಿದರು. ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ನಾಗಪುರ ವಾರ್ಡನ ಶಾಸಕರ ಕಚೇರಿಯಲ್ಲಿ ಇಂದು ಆತ್ಮನಿರ್ಭರ ಭಾರತ ಸ್ವದೇಶಿ ಸಂಕಲ್ಪದ ಅಂಗವಾಗಿ ಡಾ. ರಾಧಾ ಮೋಹನ್ ದಾಸ್ ಅಗರವಾಲ್ ಸಮ್ಮುಖದಲ್ಲಿ ಎಲ್ಲ ಕಾರ್ಯಕರ್ತರು ಸ್ವದೇಶಿ ವಸ್ತುಗಳನ್ನು ಬಳಸುತ್ತೇವೆಂದು ಪ್ರತಿಜ್ಞೆ ಸ್ವೀಕರಿಸಿದರು. ಪ್ರಧಾನಿ ಮೋದಿಜೀಯವರು ಕ್ಷಯರೋಗ ಮುಕ್ತ ಭಾರತ ಮಾಡಲು 2022ರಲ್ಲಿ ದೇಶಾದ್ಯಂತ ಕರೆ ನೀಡಿದ್ದಾರೆ.