ಬಾಗಲಕೋಟೆಯಲ್ಲಿ ಶಾಂತಿಧೂತ ಯೇಸುವಿನ ತಾಯಿ ಮರಿಯಮ್ಮನವರ ಹುಟ್ಟುಹಬ್ಬವನ್ನ ಕ್ರೈಸ್ತ ಬಾಂಧವರು ಅತ್ಯಂತ ಶೃದ್ದಾ ಭಕ್ತಿಯಿಂದ ಆಚರಿಸಿದ್ರು. ನವನಗರದ ಸೇಂಟ್ ಮೇರಿಯಸ್ ಚರ್ಚ್ ನಲ್ಲಿ ವಿಶೇಷ ವಿದ್ಯುತ್ ಅಲಂಕಾರ ಕೈಗೊಳ್ಳಲಾಗಿತ್ತು. ಇನ್ನು ಕ್ರೈಸ್ತ ಬಾಂಧವರು ಕೈಯಲ್ಲಿ ಮೊಂಬತ್ತಿ ಹಿಡಿದು ಮರಿಯಮ್ಮನವರ ಮೂರ್ತಿಯೊಂದಿಗೆ ಮೆರವಣಿಗೆ ನಡೆಸಿದ್ರು. ಅಲ್ಲದೆ ಯೇಸುವಿನ ತಾಯಿ ಮರಿಯಮ್ಮರನ್ನ ಸ್ಮರಿಸುವುದರ ಮೂಲಕ ಹುಟ್ಟುಹಬ್ಬ ಆಚರಣೆ ಮಾಡಿದ್ರು. ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನ ಭಾಗಿಯಾಗಿದ್ರು.