ಸಿರುಗುಪ್ಪ ಪಟ್ಟಣದ ಡ್ರೈವರ್ ಕಾಲೋನಿಯ 18ನೇ ವಾರ್ಡ್ನ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಶೀನ ಎನ್ನುವ 34 ವರ್ಷದ ವ್ಯಕ್ತಿಯು ಮಾರ್ಚ್15 ರಂದು ಕೆಲಸಕ್ಕೆ ಹೋಗಿಬರುತ್ತೇನೆ ಎಂದು ಮರಳಿ ಬಾರದೇ ಕಾಣೆಯಾಗಿದ್ದು, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಸಿರುಗುಪ್ಪ ಠಾಣಾಧಿಕಾರಿ ಮನವಿ ಮಾಡಿದ್ದಾರೆ. ವ್ಯಕ್ತಿಯು ಅಂದಾಜು 5.5 ಅಡಿ ಎತ್ತರ, ಗೋಧಿಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲ ಕೈಗೆ ಹಚ್ಚೆಯ ಗುರುತು ಇರುತ್ತದೆ. ಕಾಣೆಯಾದ ಸಂದರ್ಭದಲ್ಲಿ ಹಸಿರು ಬಣ್ಣದ ಅರ್ಧತೋಳಿನ ಅಂಗಿ ಮತ್ತು ನೀಲಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಕನ್ನಡ, ತೆಲುಗು, ತಮಿಳು ಭಾಷೆ ಮಾತನಾಡುತ್ತಾನೆ.