ಜಮಖಂಡಿ ತಾಲೂಕಿನ ಜಕನೂರ ಗ್ರಾಮದಲ್ಲಿ ಟ್ರ್ಯಾಕ್ಟರ ಟ್ಯಾಂಕರ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು ಬೈಕ್ ಸವಾರರಿಗೆ ಗಂಭೀರ ಗಾಯಗಳಾಗಿರುವ ಘಟನೆ ಜರುಗಿದೆ.ಜಕನೂರು ಮಾರ್ಗವಾಗಿ ಲಿಂಗನೂರ ಗ್ರಾಮಕ್ಕೆ ತೆರಳುತಿದ ಬೈಕ್ ಸವಾರರು ಮುಂಭಾಗದಿಂದ ಬರುತಿದ್ದ ಟ್ರ್ಯಾಕ್ಟರ ಟ್ಯಾಂಕರ ಗುದ್ದಿದ ಪರಿಣಾಮ ಬೈಕ್ ಸವಾರರ ಮೇಲೆ ಏರಿದೆ ಬೈಕ್ ಸವಾರರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಮಖಂಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.