ಧರ್ಮಸ್ಥಳ ಪ್ರಕರಣ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ದೇಶದ ಬಗ್ಗೆ ಕಡಿಮೆ ನಿಷ್ಠೆ ಇರೋರು ಕಮ್ಯುನಿಸ್ಟ್ ಗಳು.ಅವರೆಲ್ಲಾ ಸೇರಿ ಕುತಂತ್ರ ಮಾಡಲು ಹೊರಟಿದ್ದಾರೆ. ಇವರಿಗೆಲ್ಲಾ ಮಾಸ್ಟರ್ ಮೈಂಡ್ ಯಾರು.? ಇವರಿಗೆಲ್ಲಾ ನಾಯಕ ಸಿದ್ದರಾಮಯ್ಯ. ಅವರ ಮನೆಯಲ್ಲಿ ಸೇರಿ ಸಭೆ ಮಾಡಿ SIT ತನಿಖೆ ಮಾಡಿದ್ದಾರೆ. ಪ್ರಣವ್ ಮೊಹಂತಿ ಹೆಸರೇಳಿ ಅವರನ್ನೇ ನೇಮಕ ಮಾಡಿದ್ದು ಎಡಪಂಥೀಯರು. ರಾಜ್ಯದ ಎಲ್ಲಾ ದೇವಸ್ಥಾನ ಪರ ನಾವು ಇರ್ತೇವೆ. ಹಿಂದೂ ದೇವಾಲಯಕ್ಕೆ ಏನಾದ್ರೂ ಆದ್ರೆ ನಾವು ಹೋರಾಟ ಮಾಡ್ತೇವೆ ಎಂದರು.