25.08.2025 ರಂದು ರಾಯಲಪಾಡು ಪೊಲೀಸ್ ಠಾಣಾ ವ್ಯಾಪ್ತಿಯ ಸುಣ್ಣಕಲ್ ಕೊತ್ತಪೇಟೆ ಹೋಗುವ ಫಾರೆಸ್ಟ್ ರಸ್ತೆಯ ಪಕ್ಕ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿ ಬಿಸಾಕಿ ಹೋಗಿರುವ ಬಗ್ಗೆ ಮಾಹಿತಿ ನೀಡಿದ್ದರ ಮೇರೆಗೆ ಎಸ್ಪಿ ನಿಖಿಲ್ ಸೇರಿದಂತೆ ಪೊಲೀಸರು ಬಂದು ಪರಿಶೀಲನೆ ಮಾಡಿದ್ದು, ಸದರಿ ಕೊಲೆಯಾಗಿರುವ ವ್ಯಕ್ತಿಯ ಹೆಸರು ವೆಂಕಟರಮಣ ಸುಮಾರು 40 ವರ್ಷ, ಎಸ್. ಗೊಲ್ಲಹಳ್ಳಿ, ಪರಿಶಿಷ್ಟ ಜಾತಿ, ಕೂಲಿ ಕೆಲಸ, ಸ್ವಂತ ಊರು ಮುಳಬಾಗಲು ತಾಲೂಕು ಮೇಲೇರಿ ಗ್ರಾಮ ಸುಮಾರು 15 ವರ್ಷಗಳ ಹಿಂದೆ ಮದುವೆಯಾಗಿದ್ದು ಅಂದಿನಿಂದ ಇಲ್ಲಿಯೇ ಕೂಲಿ ಕೆಲಸ ಮಾಡಿಕೊಂಡು ಇಲ್ಲಿಯೇ ವಾಸವಿರುತ್ತಾರೆ. ಈತನನ್ನು ಯಾರೋ ಕೊಲೆ ಮಾಡಿ ಮೇಲ್ಕಂಡ ಸ್ಥಳದಲ್ಲಿ ಬಿಸಾಕಿ ಹೋಗಿರುವುದಾಗಿ ತಿಳಿದುಬಂದಿದೆ.