ಜಿಲ್ಲಾ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಇಂದು ವಿವಿಧ ಪಕ್ಷದ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು, ವಾರ್ಡ ನಂ.4 ರ ಮಾಜಿ ನಗರಸಭೆ ಸದಸ್ಯ ಈಶಪ್ಪ ಅವರ ನೇತೃತ್ವದಲ್ಲಿ ವಾರ್ಡ ನಂ.4 ರ ಕೆ.ನರಸಿಂಹಲು, ವಾರ್ಡ ನಂ.3 ರ ಪ್ರಕಾಶ ಹಾಗೂ ವಾರ್ಡ ನಂ.2 ರ ಮಾರೆಪ್ಪ ಭಂಡಾರಿ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಒಪ್ಪಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಎ.ವಸಂತ ಕುಮಾರ ಅವರ ಸಮ್ಮುಖದಲ್ಲಿ ಪಕ್ಷ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಎ.ವಸಂತಕುಮಾರ ಅವರು ಕಾಂಗ್ರೆಸ್ ಪಕ್ಷವು ಎಂದಿಗೂ ಬಡವರ, ದೀನ ದಲಿತರ ಪರ ಕೆಲಸ ಮಾಡುವ ಪಕ್ಷ ವಾಗಿದೆ ಎಂದು ಹೇಳಿದರು