ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ಪಟ್ಟಣದಲ್ಲಿ ಬೆಂಗಳೂರು-ಬಳ್ಳಾರಿ ರಸ್ತೆ ಅಗಲೀಕರಣ ಕಾರ್ಯಕ್ಕೆ ಬೃಹದಾಕಾರಣ ಮರ ಕತ್ತರಿಸಲಾಗಿದ್ದು, ಅಭಿವೃದ್ಧಿಯ ಹೆಸರಲ್ಲಿ ಮರಗಳ ಮಾರಣಹೋಮ ಮಾಡಲಾಗುತ್ತಿದೆ ಅಂತಾ ಪರಿಸರ ಪ್ರೇಮಿಗಳು ಆಕ್ರೋಶ ಗೊರಹಾಕಿದ್ದಾರೆ. ಚಿತ್ರದುರ್ಗ ಜಿಲ್ಲೆ ಮೊದಲೇ ಬರದ ಜಿಲ್ಲೆ. ಅದರಲ್ಲೂ ಚಳ್ಳಕೆರೆ ತಾಲೂಕಿನಲ್ಲಿ ಅತ್ಯಂತ ಕನಿಷ್ಟ ಮಳೆಯಾಗುತ್ತೆ. ಇಂಥ ಪರೀಸ್ಥಿತಿಯಲ್ಲಿ ಕಳೆದ 15 ವರ್ಷಗಳಿಂದ ಬೆಳೆದ ಮರಗಳನ್ನು ರಸ್ತೆ ಅಗಲೀಕರಣ ನೆಪದಲ್ಲಿ ಕತ್ತರಿಸಿ ಹಾಕಲಾಗಿದೆ. ಪ್ರತೀ ಬಾರಿ ಅಭಿವೃದ್ಧಿ ಅಂದಾಗ ಅದಕ್ಕೆ ಪ್ರಕೃತಿಯ ನಾಶವೇ ಮೊದಲು ಎನ್ನುವಂತಾಗಿದೆ. ಹೀಗೇ ಆದ್ರೆ ಮುಂಬರುವ ದಿನಗಳಲ್ಲಿ ತಾಲೂಕಲ್ಲಿ ಮರ ಹಾಗೂ ಮಳೆ ಎರಡೂ ಮರೀಚಿಕೆ ಆಗುವ ಕಾಲ ದೂರವಿಲ್ಲ ಎಂದಿದ್ದಾರೆ