ಇಂದು ಬೈಪಾಸ್ ಗಣೇಶೋತ್ಸವ ಸಮಿತಿ ಮತ್ತು ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿರುವ ರಕ್ತದಾನ ಶಿಬಿರಕ್ಕೆ ಗೌರಿಬಿದನೂರು ಗ್ರಾಮಾಂತರ ಪೋಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕರಾದ ರಮೇಶ್ ಗುಗ್ಗರಿ ಹಾಗೂ ಡಿ.ಪಾಳ್ಯ ಖಾದರ್ ಸುಭಾನ್ ಖಾನ್ ರವರು ಚಾಲನೆ ನೀಡಿದರು. ಇದೇ ವೇಳೆ ಅವರೂ ರಕ್ತದಾನ ಮಾಡಿದರು. ಹಾಗೇಯೇ ಬೈಪಾಸ್ ಗಣೇಶನ ದರ್ಶನ ಮಾಡಿ ಆಶಿರ್ವಾದ ಪಡೆದರು. ರಕ್ತದಾನ ಶಿಬಿರದಲ್ಲಿ ಯುವಕರು ಸ್ವಯಂಪ್ರೇರತರಾಗಿ ಭಾಗವಹಿಸಿದ್ದರು