ನಗರದ ಎನ್ .ಆರ್ ವೃತ್ತದ ಬಳಿ ಇರುವ ಆಟೋ ಚಾಲಕರು ತಮಗೂ ಆಟೋ ನಿಲ್ದಾಣ ನಿರ್ಮಾಣ ಮಾಡಿ ಕೊಡುವಂತೆ, ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಹಾಸನದ ಪ್ರಮುಖ ವೃತ್ತವಾಗಿರುವ ಎನ್ ಆರ್ ವೃತ್ತದಲ್ಲಿ ಆಟೋ ಚಾಲಕರು ಬಿಸಿಲಿನಲ್ಲಿ ನಿಂತು ಪ್ರಯಾಣಿಕರಿಗಾಗಿ ಕಾಯುವ ಸ್ಥಿತಿ ಇತ್ತು. ಈ ಬಗ್ಗೆ ಶಾಸಕರಲ್ಲಿ ಮನವಿ ಸಲ್ಲಿಸಿದ ಮೇರೆಗೆ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳ ಗುರುತು ಮಾಡಿ ಆಟೋ ನಿಲ್ದಾಣ ನಿರ್ಮಾಣಕ್ಕೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.