ಕೊಳ್ಳೇಗಾಲ ನಗರಸಭೆಯಲ್ಲಿ ಎ ಖಾತೆ ಹಾಗೂ ಬಿ ಖಾತೆ ವಿಳಂಬದ ಬಗ್ಗೆ ಕೆಲ ಸದಸ್ಯರು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು ಕೊಳ್ಳೇಗಾಲ ಪಟ್ಟಣದ ನಗರಸಭೆ ಕಾರ್ಯಾಲಯದಲ್ಲಿ, ಅಧ್ಯಕ್ಷೆ ಶ್ರೀಮತಿ ರೇಖಾ ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎ ಖಾತೆ ಹಾಗೂ ಬಿ ಖಾತೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನೆ ನಡೆಯಿತು. ಈ ವೇಳೆ ನಗರಸಭೆಯ ಕೆಲ ಸದಸ್ಯರು ವಿಳಂಬದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಸಭೆಯಲ್ಲಿ ಮಾತನಾಡಿದ ಸದಸ್ಯರು, ನಾಗರಿಕರಿಗೆ ಉತ್ತಮ ಮೂಲಸೌಕರ್ಯ ಒದಗಿಸಲು ಎ ಮತ್ತು ಬಿ ಖಾತೆಗಳ ಪ್ರಗತಿ ತೀವ್ರವಾಗಿ ಅಗತ್ಯವಿರುವುದಾಗಿ ಅಭಿಪ್ರಾಯಪಟ್ಟರು.