Download Now Banner

This browser does not support the video element.

ಕಲಬುರಗಿ: ಮೂಲಭೂತ ಸೌಕರ್ಯಗಳಿಲ್ಲದೇ ವಾರ್ಡ್ ನಂ 2 ತತ್ತರ: ಪಾಲಿಕೆ ಮುಂದೆ ನಿವಾಸಿಗಳ ಪ್ರತಿಭಟನೆ #Localissue

Kalaburagi, Kalaburagi | Sep 8, 2025
ಕಲಬುರಗಿ : ಕಲಬುರಗಿ ನಗರದ ವಾರ್ಡ್ ನಂಬರ್ 2 ಮತ್ತು 53 ರಲ್ಲಿ ಬರೋ ಕೆ.ಕೆ ನಗರ, ಬುದ್ದ ನಗರದಲ್ಲಿ ಹೆಚ್ಚು ಸ್ಲಂ ನಿವಾಸಿಗಳು ವಾಸವಿದ್ದು, ಈ ಬಡಾವಣೆಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ನಿವಾಸಿಗಳು ತತ್ತರಿಸಿ ಹೋಗಿದ್ದಾರೆ.. ಅದಕ್ಕಾಗಿ ಬಡಾವಣೆಗಳಲ್ಲಿ ಕುಡಿಯುವ ನೀರು, ಶೌಚಾಲಯ, ರಸ್ತೆ ಸೇರಿದಂತೆ ಇನ್ನಿತರ ಬೇಡಿಕೆಗಳನ್ನ ಈಡೇರಿಸುವಂತೆ ಆಗ್ರಹಿಸಿ ಕಲಬುರಗಿ ಪಾಲಿಕೆ ಮುಂದೆ ಸೆ8 ರಂದು ಮಧ್ಯಾನ 1 ಗಂಟೆಗೆ ಸ್ಲಂ ಜನಾಂದೋಲನ ಸಂಘಟನೆ ಪ್ರತಿಭಟನೆ ನಡೆಸಿದೆ.. ಮಹಿಳೆಯರಿಗೆ ಶೌಚಾಲಯವಿದೇ ಇರೋದು ನಾಗರಿಕ ಸಮಾಜ ತಲೆತಗ್ಗಿಸೋ ವಿಚಾರವಾಗಿದೆ.. ಕುಡಿಯುವ ನೀರಿಗಾಗಿ 2-3 ಕಿಮೀ ನಡೆದುಕೊಂಡು ಹೋಗೊ ಪರಿಸ್ಥಿತಿ ಎದುರಾಗಿದ್ದು, ಕೂಡಲೇ ಸಮಸ್ಯೆಗಳನ್ನ ಬಗೆಹರಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
Read More News
T & CPrivacy PolicyContact Us