ರಸ್ತೆ ಬದಿಯಲ್ಲಿ ನಿಂತಿದ್ದ ವ್ಯಕ್ತಿಯೊಬ್ಬರಿಗೆ ಯಾವುದೋ ವಾಹನ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ನಡೆದಿದೆ. ಬ್ಯಾಡಗಿ ಪಟ್ಟಣದ ಕಾಂತೇಶ ಕರಬಸಪ್ಪ ಬಂಡಿವಡ್ಡರ (47) ಮೃತ ವ್ಯಕ್ತಿಯಾಗಿದ್ದಾರೆ. ಮೃತರು ಹಾವೇರಿ ಹೊರವಲಯದ ತೋಟದಯಲ್ಲಾಪುರ ಬೈಪಾಸ್ ಬ್ರಿಡ್ಜ್ ಬಳಿ ನಿಂತಾಗ ಹುಬ್ಬಳ್ಳಿ ಕಡೆಯಿಂದ ಹರಿಹರ ಕಡೆಗೆ ಹೋಗುತ್ತಿದ್ದವಾಹನ ಡಿಕ್ಕಿ ಹೊಡೆದು ಅಪಘಾತ ಪಡಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಗಾಯಾಳುವನ್ನು ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ ಎಂದು ಬ್ಯಾಡಗಿಯ ರೇಣು ಟಿ. ಎಂಬುವವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.