ಯಾದಗಿರಿ ಜಿಲ್ಲೆಯ ಹುಣಸಗಿ ಪಟ್ಟಣದ ಸರಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಆವಿಷ್ಕಾರ ಮೇಳವನ್ನು ನಡೆಸಲಾಯಿತು. ಮಂಗಳವಾರ ಸಾಯಂಕಾಲದ ವರೆಗೆ ನಡೆದ ಆವಿಷ್ಕಾರ ಮೇಡಂ ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಮಿನಿತೆ ಕೇಂದ್ರದ ವತಿಯಿಂದ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಿನಿ ನಾವಿನ್ಯತೆ ಕೇಂದ್ರದ ಮುಖ್ಯಸ್ಥ ನಿಂಗಣ್ಣ ಅವರು ಚಟುವಟಿಕೆಗಳ ಕುರಿತು ವಿವರಣೆ ನೀಡಿದರು. ಅಲ್ಲದೇ ಮೇಳದಲ್ಲಿ ಇಲ್ಲಿನ ಮಕ್ಕಳುಗಳೇ ತಯಾರಿಸಿರುವ ಆವಿಷ್ಕಾರವನ್ನು ಪ್ರದರ್ಶಿಸಲಾಯಿತು. ನೂರಾರು ಜನರು ಕೂಡ ಈ ಮೇಳದಲ್ಲಿ ಪಾಲ್ಗೊಂಡು ಮಕ್ಕಳು ತಯಾರಿಸಿರುವ ಆವಿಷ್ಕಾರ ಕಲಾಕೃತಿಗಳನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.