ಬಾಗಲಕೋಟೆ ಜಿಲ್ಲೆಯ ಕಾಕನೂರು ಗ್ರಾಮದಲ್ಲಿನ ಎಸ್.ಬಿ.ಐ ಬ್ಯಾಂಕ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳ್ಳರ ಪತ್ತೆಗಾಗಿ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಅವರು ತಿಳಿಸಿದ್ದಾರೆ.ಬಾಗಲಕೋಟೆ ನಗರದ ತಮ್ಮ ಕಚೇರಿಯಲ್ಲಿ ಮಾತನಾಡಿರುವ ಅವರು ಕಾಕನೂರು ಗ್ರಾಮದ ಎಸ್.ಬಿ.ಐ ಶಾಲೆಯಲ್ಲಿ ಫ್ರೊಫೆಶನಲ್ ಕಳ್ಳರಿಂದ ಕಳ್ಳತನ ವಾಗಿದೆ ಎಂದು ಹೇಳಿದ್ದಾರೆ.ಬ್ಯಾಂಕನ ಹಿಂಬದಿ ಬಾಗಿಲಿನಿಂದ ಪ್ರವೇಶ ಮಾಡಿರುವ ಕಳ್ಳರು ಸಿಸಿಟಿವಿ ಕ್ಯಾಮರಾ ಗಳಿಗೆ ಪೇಂಟ್ ಸ್ಪ್ರೇ ಮಾಡಿದ್ದಾರೆ,ಹಾಗೂ ಗ್ಯಾಸ್ ಕಟರ್ ಬಳಕೆ ಮಾಡಿ ಲಾಕರ್ ಓಪನ್ ಮಾಡಿ ಕಳ್ಳತನ ಮಾಡಿದ್ದಾರೆಂದು ತಿಳಿಸಿದ್ದಾರೆ.ಈ ಕುರಿತು ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.