ಭದ್ರಾವತಿ ಮತ್ತು ಮದ್ದೂರು ಘಟನೆ ಬಗ್ಗೆ ವಿಧಾನಸೌಧದಲ್ಲಿ ಮಂಗಳವಾರ ಮಧ್ಯಾಹ್ನ 3:30 ರ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರು, ಭದ್ರಾವತಿ ಇರಲಿ ಸಾಗರ ಇರಲಿ, ನಾಗಮಂಗಲ ಇರಲಿ, ಮದ್ದೂರು ಇರಲಿ, ಯಾವುದನ್ನು ಬಿಡಿಬಿಡಿಯಾಗಿ ನೋಡಬಾರದು. ಇದರ ಹಿಂದಿರುವ ಮಾನಸಿಕತೆ ನೋಡಬೇಕು. ಅಂಬೇಡ್ಕರ್ ಅವ್ರು ಮುಸ್ಲಿಂ ಮಾನಸಿಕತೆ ಬಗ್ಗೆ ಬರೆದಿದ್ದಾರೆ. ಮುಸ್ಲಿಮರು ಯಾವತ್ತು ಒಂದಾಗಿ ಬಾಳಲ್ಲ. ಮುಸ್ಲಿಮೇತರರು ಕಾಫಿರರಾಗುತ್ತಾರೆ. ಇನ್ನೊಂದು ಧರ್ಮವನ್ನು ಮುಸಲ್ಮಾನರು ಸಹಿಸುವುದಿಲ್ಲ. ಓಟಿನ ಆಸೆಗೆ ಸರಕಾರ ಕಣ್ಣಿದ್ದು ಕುರುಡಾಗಿದೆ. ಎಳೆ ಮಕ್ಕಳ ಮನಸ್ಸಿನಲ್ಲಿ ಉಗಿಯುವ ವಿಷ ಬೀಜ ತುಂಬಿದ್ದಾರೆ. ಇಸ್ಲಾಂನಲ್ಲಿ ಅದು ಇರುವ ಕಾರಣ ಅದನ್ನು ಮಕ್ಕಳ ಮನಸ್ಸಿನಲ್ಲಿ ತುಂಬಿದ್ದಾರೆ.